Saturday, Oct 16 2021 | Time 19:28 Hrs(IST)
Top News
ಶುಲ್ಕ ವಸೂಲಿ ಸಂಬಂಧ ಕ್ರಮ ಕೈಗೊಳ್ಳಲು ಶಾಲಾ ಆಡಳಿತ ಮುಕ್ತ: ಸುಪ್ರೀಂ

ಶುಲ್ಕ ವಸೂಲಿ ಸಂಬಂಧ ಕ್ರಮ ಕೈಗೊಳ್ಳಲು ಶಾಲಾ ಆಡಳಿತ ಮುಕ್ತ: ಸುಪ್ರೀಂ

“ಇನ್ನೂ ಪಾವತಿಯಾಗದ ಬಾಕಿ ಹಣ/ ಮೊತ್ತ ವಸೂಲು ಮಾಡಲು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲು ಶಾಲಾ ಆಡಳಿತ ಮುಕ್ತವಾಗಿವೆ. ಇದೇ ವೇಳೆ ಸಂಬಂಧಪಟ್ಟ ಪೋಷಕರು/ ಪಾಲಕರು ನಿಜವಾಗಿಯೂ ವಿನಾಯಿತಿ ಬಯಸಿದರೆ ಅಂತಹ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಲು ಶಾಲಾಡಳಿತ ಮುಕ್ತವಾಗಿದೆ. ಇದರ ಹೊರತಾಗಿ ಹೆಚ್ಚೇನನ್ನೂ ಹೇಳಬೇಕಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ..

see more..
ವಿಪತ್ತು ಎದುರಾದರೂ ನ್ಯಾಯಾಂಗದ ಕೆಲಸ ನಿಲ್ಲಬಾರದು: ನ್ಯಾ. ಓಕ್

ವಿಪತ್ತು ಎದುರಾದರೂ ನ್ಯಾಯಾಂಗದ ಕೆಲಸ ನಿಲ್ಲಬಾರದು: ನ್ಯಾ. ಓಕ್

ಕರ್ನಾಟಕದ ಹಲವೆಡೆ ವಕೀಲರ ಸಂಘಗಳಿಗೆ ಪ್ರತ್ಯೇಕ ಕಟ್ಟಡ ವ್ಯವಸ್ಥೆ ಇರುವುದನ್ನು ಪ್ರಸ್ತಾಪಿಸಿದ ಅವರು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ 5 ಅಂತಸ್ತಿನ ಕಟ್ಟಡವನ್ನು ವಕೀಲರ ಸಂಘಕ್ಕೆಂದೇ ಮೀಸಲಿಟ್ಟಿದ್ದು ಇದರಲ್ಲಿ ಒಂದು ಸಭಾಂಗಣ, ಪ್ರತ್ಯೇಕ ಚೇಂಬರ್ಗಳು ಹಾಗೂ ಎರಡು ರೆಸ್ಟೋರೆಂಟ್ಗಳಿವೆ ಎಂದು ತಿಳಿಸಿದರು.

see more..
ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಅನುಕೂಲ: ಪ್ರಧಾನಿ

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಅನುಕೂಲ: ಪ್ರಧಾನಿ

ಕೊರೊನಾ ಹಾವಳಿ ಮಧ್ಯೆ ವಿಶ್ವದ ಅರ್ಥವ್ಯವಸ್ಥೆ ಹದಗೆಟ್ಟಿತ್ತು. ಭಾರತದ ಆರ್ಥಿಕ ಪರಿಸ್ಥಿತಿಯೂ ಹಳಿ ತಪ್ಪಿತ್ತು. ಈ ಕಠಿಣ ಪರಿಸ್ಥಿತಿಯ ನಂತರ ಅತ್ಯಂತ ವೇಗವಾಗಿ ಭಾರತ, ತನ್ನ ಅಭಿವೃದ್ಧಿ ಪಥಕ್ಕೆ ಹಿಂತಿರುಗಿದೆ. ದೇಶದ ಅಭಿವೃದ್ಧಿ ವಿಶ್ವದ ಇತರ ರಾಷ್ಟ್ರಗಳಿಗೆ ಹುಬ್ಬೇರುವಂತೆ ಮಾಡಿದೆ ಅಂತಾ ಪ್ರಧಾನಿ ಮೋದಿ ಹೇಳಿದರು.

see more..
ಮಾಜಿ ಸಿಎಂಗೆ ಸಿಎಂ ತಿರುಗೇಟು !

ಮಾಜಿ ಸಿಎಂಗೆ ಸಿಎಂ ತಿರುಗೇಟು !

ನನ್ನ ತಂದೆ ನನಗೆ ಸಾರ್ವಜನಿಕ ಜೀವನದಲ್ಲಿ ಯಾವುದು ಉತ್ತಮ ಎಂಬುದನ್ನು ಕಲಿಸಿದ್ದಾರೆ. ಅವರು ಬದುಕಿನುದ್ದಕ್ಕೂ ರಾಷ್ಟ್ರೀಯವಾದಿ. ನಾನೂ ಅದನ್ನೇ ಅನುಸರಿಸುತ್ತಿದ್ದೇನೆ. ಇದೇ ರೀತಿಯ ಮಾರ್ಗದರ್ಶನವನ್ನು ಅವರು ನಿಮಗೂ ಮಾಡಿರಬಹುದು ಎಂಬುದು ನನ್ನ ಭಾವನೆ ಎಂದಿದ್ದಾರೆ.

see more..
ಪರಾಗ್ವೆ ಮುಖ್ಯ ಕೋಚ್ ಹುದ್ದೆಯಿಂದ ಎಡ್ವರ್ಡೊ ಬೆರಿಜ್ಜೊ ವಜಾ

ಪರಾಗ್ವೆ ಮುಖ್ಯ ಕೋಚ್ ಹುದ್ದೆಯಿಂದ ಎಡ್ವರ್ಡೊ ಬೆರಿಜ್ಜೊ ವಜಾ

2022 ರ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಪರಾಗ್ವೆ 4-0 ಅಂತರದಲ್ಲಿ ಬೊಲಿವಿಯಾ ವಿರುದ್ಧ ಸೋಲನುಭವಿಸಿದ ಕೆಲವೇ ಗಂಟೆಗಳಲ್ಲಿ ಈ ಘೋಷಣೆ ಹೊರಬಂದಿದೆ. ಈ ಪಂದ್ಯದಲ್ಲಿ 10 ತಂಡಗಳ ದಕ್ಷಿಣ ಅಮೆರಿಕನ್ ಗುಂಪಿನಲ್ಲಿ ಗ್ಯಾರನೀಸ್ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ. "ನಾವು ಗೆಲುವನ್ನು ಬಯಸುತ್ತೇವೆ. ಮುಂಬರುವ ದಿನಗಳಲ್ಲಿ ಹೊಸ ಕೋಚ್​ ಯಾರು ಎಂಬುದನ್ನು ಬಹಿರಂಗಪಡಿಸುತ್ತೇವೆ" ಎಂದು ಪರಾಗ್ವೆ ಫುಟ್ಬಾಲ್ ಅಸೋಸಿಯೇಷನ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ.

see more..
ಆಫ್ಘಾನಿಸ್ತಾನ: ಶಿಯಾ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ, 16 ಜನರ ಸಾವು

ಆಫ್ಘಾನಿಸ್ತಾನ: ಶಿಯಾ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ, 16 ಜನರ ಸಾವು

ಶುಕ್ರವಾರ ಪ್ರಾರ್ಥನೆ ನಡೆಯುವ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಹೊಣೆಯನ್ನು ಇದುವರೆಗೆ ಯಾವುದೇ ಭಯೋತ್ಪಾದಕ ಗುಂಪು ಹೊತ್ತುಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಹಲವಾರು ದಾಳಿಗಳನ್ನು ನಡೆಸಿದೆ. ಕಳೆದ ಒಂದು ವಾರದಲ್ಲಿ ಅಫ್ಘಾನಿಸ್ತಾನದ ಶಿಯಾ ಮಸೀದಿಯ ವಿರುದ್ಧ ನಡೆದ ಎರಡನೇ ಬಾಂಬ್ ದಾಳಿ ಇದಾಗಿದೆ.

see more..
ಸೆಲ್ಯುಲಾರ್ ಜೈಲಿಗೆ ಗೃಹ ಸಚಿವ ಭೇಟಿ: ಸಾವರ್ಕರ್ ಬಂಧಿಸಿದ್ದ ಸೆಲ್​ಗೆ ಪುಷ್ಪಾರ್ಚನೆ

ಸೆಲ್ಯುಲಾರ್ ಜೈಲಿಗೆ ಗೃಹ ಸಚಿವ ಭೇಟಿ: ಸಾವರ್ಕರ್ ಬಂಧಿಸಿದ್ದ ಸೆಲ್​ಗೆ ಪುಷ್ಪಾರ್ಚನೆ

ಸಾವರ್ಕರ್ ಅವರು ಸೆಲ್ಯುಲಾರ್ ಜೈಲನ್ನು 'ತೀರ್ಥಸ್ಥಾನ'ವಾಗಿ ಪರಿವರ್ತಿಸಿದರು. ನೀವು ನಮಗೆ ಬೇಕಾದಷ್ಟು ಚಿತ್ರಹಿಂಸೆ ನೀಡಿ, ಆದ್ರೆ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಜಗತ್ತಿಗೆ ಸಂದೇಶ ನೀಡಿದ್ದರು. 'ನನ್ನ ದೇಶವನ್ನು ಸ್ವತಂತ್ರಗೊಳಿಸುವುದು ನನ್ನ ಜನ್ಮಸಿದ್ಧ ಹಕ್ಕು' ಸಾವರ್ಕರ್ ಇದನ್ನು ಇಲ್ಲಿ ಸಾಧಿಸಿದರು ಎಂದು ಅಮಿತ್​​ ಶಾ ಹೇಳಿದ್ದಾರೆ.

see more..
ಡೈವೋರ್ಸ್​ ಬಳಿಕ ಮೊದಲ ಸಿನಿಮಾಗೆ ಸಹಿ ಹಾಕಿದ ನಟಿ ಸಮಂತಾ

ಡೈವೋರ್ಸ್​ ಬಳಿಕ ಮೊದಲ ಸಿನಿಮಾಗೆ ಸಹಿ ಹಾಕಿದ ನಟಿ ಸಮಂತಾ

ನಟ ನಾಗ ಚೈತನ್ಯರಿಂದ ದೂರವಾಗುವುದಾಗಿ ಘೋಷಿಸಿದ ನಂತರ ಸುದ್ದಿಯಲ್ಲಿದ ನಟಿ ಸಮಂತಾ, ಇದೀಗ ತಮಿಳು ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗುವ ಸಿನಿಮಾವೊಂದಕ್ಕೆ ಸಹಿ ಹಾಕುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

see more..